{"product_id":"ಆತ್ಮತೀರ್ಥ-ಆಚಾರ್ಯ-ಶಂಕರರ-ಪವಿತ್ರ-ಜೀವನ-ಮತ್ತು-ಉಪದೇಶಗಳು-ಸ್ವತಂತ್ರವಾದ-ವೇದಾಂತ-ಕೃತಿ-sri-ramanacharanatirtha-swamigal-ಪೂಜ್ಯಶ್ರೀ-ರಮಣಚರಣತೀರ್ಥ-ಸ್ವಾಮಿಗಳು","title":"ಆತ್ಮತೀರ್ಥ - ಆಚಾರ್ಯ ಶಂಕರರ ಪವಿತ್ರ ಜೀವನ ಮತ್ತು ಉಪದೇಶಗಳು (ಸ್ವತಂತ್ರವಾದ ವೇದಾಂತ ಕೃತಿ)","description":"\u003cp\u003e'ಆತ್ಮತೀರ್ಥ' ಎನ್ನುವ ಈ ಗ್ರಂಥವು ಹಿಂದೂ ಧರ್ಮದ ಶ್ರೇಷ್ಠ ಆಚಾರ್ಯರಾದ ಶ್ರೀ ಶಂಕರ ಭಗವತ್ಪಾದರ ಜೀವನ ಮತ್ತು ಚರಿತ್ರೆಯನ್ನು ಒಳಗೊಂಡಿದೆ. ಇದು ಐತಿಹಾಸಿಕವಾದ ಗ್ರಂಥವಲ್ಲ, ಬದಲಿಗೆ ಭವ್ಯವಾದ ಒಂದು ಸ್ವತಂತ್ರ ವೇದಾಂತ ಗ್ರಂಥವೇ ಆಗಿದೆ. ಮಹಾ ದೇಶಿಕನ ಜೀವನವನ್ನು ದಿಟ್ಟಿಸಿ ನೋಡುವಾಗ ಅಲ್ಲಲ್ಲಿ ಆಳವಾದ ಅಧ್ಯಾತ್ಮಿಕ ಒಳನೋಟದೊಂದಿಗೆ ಕಾಂತಿಕಣಗಳೂ ಸಿಗುತ್ತವೆ. ಆಚಾರ್ಯರ ವೈಭವ ಮತ್ತು ಅವರ ಬೋಧನೆಗಳ ಘನತೆಯು, ನಮಗೆ ಆಳವಾದ ಶಾಂತಿಯನ್ನು ನೀಡಿ ನಮ್ಮ ನಿಜ ಸ್ವರೂಪದೆಡೆಗೆ ಕೊಂಡೊಯ್ಯುತ್ತವೆ.\u003c\/p\u003e\n\u003cp\u003eಒಬ್ಬ ಜಿಜ್ಞಾಸುವಿಗೆ ಬರಬಹುದಾದ ವೇದಾಂತ ವಿಷಯವಾದ ಸಂಶಯಗಳು, ಅಧ್ಯಾತ್ಮ ಸಾಧನೆಗಳ ಬಗ್ಗೆ ಇರುವ ಗೊಂದಲಗಳನ್ನು ಈ ಗ್ರಂಥದ ನಿರೂಪಣೆಯಲ್ಲಿ ಪರಿಹರಿಸಲಾಗಿದೆ. ಶ್ರದ್ಧಾವಂತನಾದ ಒಬ್ಬ ಸದ್ಭಕ್ತನು ಈ ಗ್ರಂಥವನ್ನು ಓದುವಾಗ, ಪ್ರಬುದ್ಧ ಯತಿಯೊಂದಿಗೆ ಕೇರಳದಿಂದ ಕೇದಾರ ಪರ್ಯಂತ ಒಂದು ದಿವ್ಯ ಯಾತ್ರೆಯನ್ನು ಮಾಡುವನು ಎಂಬುದು ನಿಶ್ಚಯ. ಈ ಮಹಾಪುರುಷರ ಚರಿತ್ರೆಯನ್ನು ಅನುಭವಿಸುವಾಗ ಭಕ್ತಿ, ಜ್ಞಾನ ಮತ್ತು ವೈರಾಗ್ಯವು ಓದುಗರ ಹೃದಯದಲ್ಲಿ ಸಹಜವಾಗಿ ಸೂಸುವುದು.\u003c\/p\u003e\n\u003cp\u003eಈ ಗ್ರಂಥದಲ್ಲಿ ಅಚಾರ್ಯರ ಪವಿತ್ರ ಚರಿತ್ರೆಯನ್ನು ನಿರಾಯಾಸವಾಗಿ ಹೇಳಲಾಗಿದೆ. ಸತ್ಯಾಸತ್ಯತೆಗಳಿಗಿಂತ ಐತಿಹಾಸಿಕ ವಿವರಗಳಿಗಿಂತ, ವೇದಾಂತ ಶಾಸ್ತ್ರದ ಅತ್ಯುನ್ನತ ಲಕ್ಷ್ಯವಾದ ಆತ್ಮಸಾಕ್ಷಾತ್ಕಾರವನ್ನು ಹಿನ್ನಲೆಯಾಗಿ ಇಟ್ಟುಕೊಂಡೇ ಬೋಧಿಸಲಾಗಿದೆ. ಇದು ಅಧ್ಯಾತ್ಮ ಭಾರತದ ಕಥೆ, ನಮ್ಮ ಸನಾತನ ಧರ್ಮದ ಕಥೆಯೇ ಹೌದು ಎಂಬುದರಲ್ಲಿ ಸಂದೇಹವಿಲ್ಲ.\u003c\/p\u003e\n\u003cp\u003eಈ ಗ್ರಂಥವು ಐವತ್ತಕ್ಕೂ ಹೆಚ್ಚು ಸುಂದರವಾದ ಛಾಯಾಚಿತ್ರಗಳನ್ನು ಹೊಂದಿದ್ದು ಓದುಗರಿಗೆ ಭಕ್ತಿಪೂರ್ವಕವಾದ ಅನುಭವವನ್ನು ನೀಡುತ್ತದೆ. ಆಚಾರ್ಯರ ಕಾಲಾತೀತ ಬೋಧನೆಗಳು ಮತ್ತು ದಿವ್ಯ ಕೃತಿಗಳೊಂದಿಗೆ ಕೂಡಿರುವ ನಿರೂಪಣೆಯು, ಓದುಗರಿಗೆ ಕೇವಲ ಓದಲು ಮಾತ್ರವಲ್ಲದೆ, ಅವರ ಪವಿತ್ರ ಜೀವನದಲ್ಲಿ ಆಂತರಿಕವಾಗಿ ಪಾಲ್ಗೊಳ್ಳಲು ಅವಕಾಶ ನೀಡುತ್ತದೆ.\u003c\/p\u003e\n\u003cp\u003eಪ್ರತಿಯೊಬ್ಬ ಹಿಂದೂವೂ ಈ ಪುಸ್ತಕವನ್ನು ಹೆಮ್ಮೆಯಿಂದ ಓದಬೇಕು. ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿ ನೀಡುವ ಸಾಮರ್ಥ್ಯವುಳ್ಳ ಈ ಗ್ರಂಥವನ್ನು ಉತ್ತಮವಾದ ಮತ್ತು ಅರ್ಥಪೂರ್ಣವಾದ ಉಡುಗೊರೆಯಾಗಿಯೂ ನಾವು ನೀಡಬಹುದು.\u003c\/p\u003e\n\u003cp\u003eAvailable in English, Malayalam, Hindi, Tamil, Kannada, French and Swedish.\u003c\/p\u003e\n\u003cp\u003e\u003cspan\u003ePrice includes standard shipping and handling. An optional Speed Post service is available at an additional cost, based on estimated shipping and handling charges.\u003c\/span\u003e\u003c\/p\u003e\n\u003cp\u003e\u003cspan\u003eCurrently shipping only within India.\u003c\/span\u003e\u003cbr\u003e\u003cbr\u003e\u003cspan\u003eFor bulk orders, either place multiple orders or contact us at \u003c\/span\u003e\u003ca href=\"mailto:publications@voiceofrishis.org\" target=\"_blank\"\u003epublications@voiceofrishis.org\u003c\/a\u003e\u003c\/p\u003e","brand":"Sri Ramana Maharshi Brahmavidyasrama Trust","offers":[{"title":"Default Title","offer_id":52797322559804,"sku":null,"price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0752\/7569\/8492\/files\/C14_-_Atmatirtham_-_Kannada.png?v=1772191647","url":"https:\/\/www.voiceofrishis.org\/products\/%e0%b2%86%e0%b2%a4%e0%b3%8d%e0%b2%ae%e0%b2%a4%e0%b3%80%e0%b2%b0%e0%b3%8d%e0%b2%a5-%e0%b2%86%e0%b2%9a%e0%b2%be%e0%b2%b0%e0%b3%8d%e0%b2%af-%e0%b2%b6%e0%b2%82%e0%b2%95%e0%b2%b0%e0%b2%b0-%e0%b2%aa%e0%b2%b5%e0%b2%bf%e0%b2%a4%e0%b3%8d%e0%b2%b0-%e0%b2%9c%e0%b3%80%e0%b2%b5%e0%b2%a8-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%89%e0%b2%aa%e0%b2%a6%e0%b3%87%e0%b2%b6%e0%b2%97%e0%b2%b3%e0%b3%81-%e0%b2%b8%e0%b3%8d%e0%b2%b5%e0%b2%a4%e0%b2%82%e0%b2%a4%e0%b3%8d%e0%b2%b0%e0%b2%b5%e0%b2%be%e0%b2%a6-%e0%b2%b5%e0%b3%87%e0%b2%a6%e0%b2%be%e0%b2%82%e0%b2%a4-%e0%b2%95%e0%b3%83%e0%b2%a4%e0%b2%bf-sri-ramanacharanatirtha-swamigal-%e0%b2%aa%e0%b3%82%e0%b2%9c%e0%b3%8d%e0%b2%af%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%ae%e0%b2%a3%e0%b2%9a%e0%b2%b0%e0%b2%a3%e0%b2%a4%e0%b3%80%e0%b2%b0%e0%b3%8d%e0%b2%a5-%e0%b2%b8%e0%b3%8d%e0%b2%b5%e0%b2%be%e0%b2%ae%e0%b2%bf%e0%b2%97%e0%b2%b3%e0%b3%81","provider":"Voice of Rishis","version":"1.0","type":"link"}